‘ಎಂಎಲ್ಸಿ, ಪಕ್ಷಕ್ಕೆ ರಾಜೀನಾಮೆ ಕೊಡ್ತೀನಿ, ಕಾಂಗ್ರೆಸ್‌ಗೆ ಕೆಲಸ ಮಾಡ್ತೀನಿ’; ಆನ್‌ ದ ರೆಕಾರ್ಡ್‌ನಲ್ಲಿ ವಿಶ್ವನಾಥ್‌

ಬೆಂಗಳೂರು; ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ವರ್ಷ ಆಡಳಿತವನ್ನೇ ನಡೆಸಿರಲಿಲ್ಲ. ಬದಲಿಗೆ ಆರ್‌ಎಸ್‌ಎಸ್‌, ಬಜರಂಗದಳ, ಶ್ರೀರಾಮಸೇನೆಯಂತಹ ಹೊರಗಿನ ಶಕ್ತಿಗಳೇ ಆಡಳಿತ ನಡೆಸಿದ್ದರು ಎಂದು ಬಿಜೆಪಿ ನಾಮನಿರ್ದೇಶಿತ ವಿಧಾನಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

 

‘ದಿ ಫೈಲ್‌’ನ ಕನ್ಸಲ್ಟಿಂಗ್‌ ಎಡಿಟರ್‌ ಸಂಗೀತಾ ನಂಜುಂಡಸ್ವಾಮಿ ಅವರು ನಡೆಸಿಕೊಟ್ಟ ಆನ್‌ ದಿ ರೆಕಾರ್ಡ್‌ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಎಚ್‌ ವಿಶ್ವನಾಥ್‌ ಅವರು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಬಿಜೆಪಿ ಪಕ್ಷಕ್ಕೆ ಮತ್ತು ವಿಧಾನ ಪರಿಷತ್‌ ಸದಸ್ಯತ್ವಕ್ಕೂ ಶೀಘ್ರದಲ್ಲೇ ರಾಜೀನಾಮೆ ನೀಡಲಾಗುವುದು ಎಂದು ಹೇಳಿದರು. ಹಾಗೆಯೇ ಮುಂದಿನ ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಕೂಡ ನೀಡಿದರು.

 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನೀಡಿರುವ ಗ್ಯಾರಂಟಿಗಳ ಬಗ್ಗೆ ಕೊಂಡಾಡಿದರು. ದೇವರಾಜ ಅರಸು, ಗುಂಡೂರಾವ್‌, ಎಸ್‌ ಎಂ ಕೃಷ್ಣ ಅವರ ಆಡಳಿತ ವೈಖರಿ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಎಚ್‌ ವಿಶ್ವನಾಥ್‌,  ಅರಸು ಅವರ ಮುತ್ಸದ್ಧೀತನ, ಅವರು  ತಮಗೆ ರಾಜಕೀಯವಾಗಿ ಸಹಕರಿಸಿದ್ದನ್ನು ನೆನಪಿಸಿಕೊಂಡರು.

 

ಹಾಗೆಯೇ ಅವರ ಕುರಿತಾದ ಹಲವು ರಾಜಕೀಯ ಪ್ರಸಂಗಗಳನ್ನು ಮೆಲಕು ಹಾಕಿದರು. ರಾಜ್ಯಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ನಿಷ್ಠರಾಗಿದ್ದನ್ನು ಅರಸು ಅವರು ಮೆಚ್ಚುಗೆ ವ್ಯಕ್ತಪಡಿಸಿದ ಸಂಗತಿಯನ್ನು ವಿವರಿಸಿದರು.

 

ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್‌ ವಿಶ್ವನಾಥ್‌ ಅವರು ಶಾಲಾ ಮಕ್ಕಳಿಗಾಗಿ ಜಾರಿಗೊಳಿಸಿದ ಮಧ್ಯಾಹ್ನದ ಬಿಸಿಯೂಟದ ಹಿಂದಿನ ಹಸಿವಿನ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

 

ವಿವಾದಸ್ಪದ ವ್ಯಕ್ತಿತ್ವ, ನಿಷ್ಠುರತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ವಿಶ್ವನಾಥ್‌ ಅವರು ವಾಸ್ತವಿಕ ನೆಲಗಟ್ಟಿನಲ್ಲಿ ನೋಡಿದ್ದನ್ನೇ ವಿವಾದ ಎಂದು ಬಿಂಬಿಸಿದರು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡವನಲ್ಲ. ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡಿದ್ದಕ್ಕೆ ವಿವಾದ ಎಂದು ಬಿಂಬಿಸಿದರು.

ಜೆಡಿಎಸ್‌ಗೆ ಹೋಗಿದ್ದರ ಬಗ್ಗೆ ಮಾತನಾಡಿದ ವಿಶ್ವನಾಥ್‌ ಅವರು ಅದು ರಾಜಕಾರಣದ ಪರಿಸ್ಥಿತಿ. ಕಾಂಗ್ರೆಸ್‌ನ 40 ವರ್ಷಗಳ ರಾಜಕೀಯ ಸುದೀರ್ಘ ಪಯಣ. ಹಲವಾರು ಕಾರಣಗಳಿಂದ ನನ್ನ ಮನಸ್ಸಿಗೆ ನೋವಾಗಿ ಕಾಂಗ್ರೆಸ್‌ ತೊರೆಯಬೇಕಾಧ ಪರಸ್ಥಿತಿ ಬಂತು. ಹಾಗಾಗಿ ಕಾಂಗ್ರೆಸ್‌ ತೊರೆದು ಇನ್ನೊಂದು ಹತ್ತಿರವಾದ ಜಾತ್ಯಾತೀತ ಸಿದ್ಧಾಂತಗಳ ಪಕ್ಷಕ್ಕೆ ಸೇರಿಕೊಂಡೆ. ನಾನು ಸೇರೋಕು ಮುಂಚೆ ಜೆಡಿಎಸ್‌ಗೆ ದೇವೇಗೌಡರು ಆಹ್ವಾನಿಸಿದರು. ನನ್ನಲ್ಲಿನ ದೂರದರ್ಶಿತ್ವವನ್ನ ಗುರುತಿಸಿದರು. ಹೀಗಾಗಿ ಜೆಡಿಎಸ್‌ ಸೇರಿದೆ ಎಂದು ನೆನಪಿಸಿಕೊಂಡರು.

 

ದೇವೇಗೌಡರ ಪ್ರಭಾವ, ನನ್ನ ಸಂಪರ್ಕಗಳಿಂದಾಗಿ, ನಾನು ಮಂತ್ರಿಯಾಗಿ, ಎಂಪಿಯಾಗಿ ಮಾಡಿದ ಕೆಲಸಗಳನ್ನು ಕ್ರೋಢೀಕರಿಸಿಕೊಂಡು ಹುಣಸೂರಿನಲ್ಲಿ ಗೆದ್ದೆ. ಅಲ್ಲಿನ ಶಾಸಕನನ್ನಾಗಿ ಆರಿಸಿದರು. ಒಂದೂವರೆ ವರ್ಷ ನನಗೆ ಏಕೋ ಅಲ್ಲಿ ಇರಲಿಕ್ಕೆ ಆಗಲಿಲ್ಲ. ರಾಜ್ಯಾಧ್ಯಕ್ಷನ್ನಾಗಿಯೂ ಮಾಡಿದ್ದರು. ಆದರೆ ಕುಮಾರಸ್ವಾಮಿ ಅವರಿಗೂ ನನಗೂ ಕೆಲವು ಮಾತುಗಳು ಬಂದವು. ಮತ್ತು ಅವರ ಸಮಾಜವಾದಿ ವಿರೋಧಿ ನಿಲುವುಗಳು ಸರಿ ಕಾಣಲಿಲ್ಲ.

 

ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವರನ್ನು ಮಾಡಲು ಜೆಡಿಎಸ್‌ಗೆ ನೀಡಲಾಗಿತ್ತು. 10 ರಲ್ಲಿ 2 ತುಂಬಲಿಲ್ಲ. 8ರಲ್ಲಿ 7 ಸಚಿವರು ಇವರ ಮನೆಯವರೇ ಇದ್ದರು. ಕುರುಬರಿಗೆ ಎರಡು ಮಾತ್ರ ಇತ್ತು. ವೀರಶೈವರಿಗೆ ನೀಡಿದ ನಂತರ ಇನ್ನೂ 2 ಇತ್ತು. ಉಳಿದ 2 ರಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರಿಗೆ ಬಿಟ್ಟುಕೊಡಿ ಎಂದು ಕುಮಾರಸ್ವಾಮಿಗೆ ಹೇಳಿದೆ. ಅವರು ಬಿಟ್ಟುಕೊಡಲಿಲ್ಲ ಎಂದು ಹೇಳಿದರು.

 

ಯಾವುದೋ ಒಂದು ಪರಿಸ್ಥಿತಿಯಲ್ಲಿ ದೊಡ್ಡ ಭಿನ್ನಾಭಿಪ್ರಾಯಗಳು ಶುರುವಾದವು. ನಾನು ಬಹಳ ದಿವಸ ಉಳಿಯಲಾಗದು ಎಂದು ದೇವೇಗೌಡರಿಗೆ ಹೇಳಿದೆ. ನಿಮ್ಮ ಮನಸ್ಸಿಗೆ ವಿರೋಧವಾಗಿ ಇಲ್ಲಿ ನಡೆಯುತ್ತಿದೆ ಎಂದು ಹೇಳಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆನೆ. ನಾನು ಬದುಕಿರುವ ತನಕವೂ ನಿಮ್ಮ ಫೋಟೋವನ್ನು ನನ್ನ ದೇವರ ಮನೆಯಲ್ಲಿಡುತ್ತೇನೆ. ದೇವರಾಜು ಅರಸು ಮತ್ತು ನೀವು ಇಬ್ಬರೇ ಮಾದರಿ ಎಂದು ಹೇಳಿ ರಾಜೀನಾಮೆ ನೀಡಿದೆ ಎಂದು ವಿವರಿಸುತ್ತಲೇ ಹಲವು ಸಂಗತಿಗಳನ್ನು ಮೆಲುಕು ಹಾಕಿದರು.

 

ಬಿಜೆಪಿ ಬಗ್ಗೆ ಮೇಲ್ನೋಟಕ್ಕೆ ಬೇರೆ ಬೇರೆ ಅಭಿಪ್ರಾಯಗಳಿದ್ದವು. ಒಳನೋಟ ಕಂಡಿರಲಿಲ್ಲ. ಮೇಲ್ನೋಟಕ್ಕೆ ರಾಷ್ಟ್ರೀಯತೆ ಅವರ ಮಾತುಗಳು ಮತ್ತು ಭಾಷಣಗಳನ್ನು ಕೇಳಿ ನಂಬಿದ್ದೆ. ಒಳಗೆ ನೋಡಿದರೆ ಎಲ್ಲವೂ ಸುಳ್ಳಾಯಿತು. ಅದರ ಪರಿಕಲ್ಪನೆಗೆ ಬಗ್ಗೆ ಶುದ್ಧ ಸುಳ್ಳು ಎಂದಾಯಿತು ಎಂದು ವಿವರಿಸಿದರು.

 

ಸರ್ಕಾರ ರಚನೆ ಆದ ಮೇಲೆ ಎಂತದ್ದನ್ನೂ ನಾನು ಧಿಕ್ಕರಿಸಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ನಮ್ಮನ್ನು ಯಾವ ರೀತಿ ಗಣನಗೆಗೆ ತೆಗೆದುಕೊಳ್ಳಲಿಲ್ಲ. ಆದರೆ ಸಿಎಂ ಆಗಿ ಒಂದು ಜನವಿರೋಧಿ ನೀತಿ ಕೈಗೊಂಡರು. ಜಿಂದಾಲ್‌ ಕಂಪನಿಗೆ 3,667 ಎಕರೆ ಸರ್ಕಾರಿ ಜಮೀನು ಔಟ್‌ ರೇಟ್‌ ಸೇಲ್‌ ನಂತೆ ಎಕರೆಗೆ 15 ಲಕ್ಷದಂತೆ ಮಾರಾಟ ಮಾಡಿದರು ಎಂದು ಟೀಕಿಸಿದರು.

 

ಸಿದ್ದರಾಮಯ್ಯ ಜನಪರ ಕಾರ್ಯಕ್ರಮಗಳನ್ನು ಹಿಂದೆಯೂ ಕೊಟ್ಟಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಕುಮಾರಸ್ವಾಮಿ ಅವರು ಹಲವು ಕಾರ್ಯಕ್ರಮಗಳನ್ನು ಕೊಟ್ಟರು. ರೈತರ ಸಾಲಮನ್ನಾ, ಸಾರಾಯಿ ತೆಗೆದಿದ್ದು. ಕರೆಪ್ಷನ್‌ ವಿಚಾರದಲ್ಲಿ ಯಾರೂ ಕಡಿಮೆ ಇಲ್ಲ. ಇವರೇನು ಸತ್ಯವಂತರೇ. ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರು ಸತ್ಯವಂತರೇ. ಎಲ್ಲರಿಗೂ ಗೊತ್ತಿರುವ ವಿಚಾರ. ಒಬ್ಬರು ಕಡಿಮೆ ಮತ್ತೊಬ್ಬರು ಹೆಚ್ಚು. ವಾಸ್ತವ ನೆಲೆಗಟ್ಟಿನಲ್ಲಿ. ಕರೆಪ್ಷನ್‌ ಪ್ರೂವ್ ಮಾಡುವುದು ಆಗುತ್ತಾ. ಬೊಮ್ಮಾಯಿ, ಕುಮಾರಸ್ವಾಮಿ ಅವರು ಒಳಗೇ ಕುದಿಯೋರು ಎಂದು ಹೇಳಿದರು.

 

ನಾನು ಕಾಂಗ್ರೆಸ್‌ ಗೆ ಕೆಲಸ ಮಾಡ್ತೀನಿ. ನಾನು ನಾಮಿನೇಟೆಡ್‌ ಎಂಎಲ್ಸಿ. ನಾಟ್‌ ಎಲೆಕ್ಟೆಡ್‌. 7 ಪುಸ್ರಕಗಳನ್ನು ಬರೆದಿದ್ದೇನೆ. ಅದೇನು ಕಾಗಕ್ಕ ಗುಬ್ಬಕ್ಕ ಕತೆಯಲ್ಲ. ರಾಷ್ಟ್ರ, ಅಂತರರಾಷ್ಟ್ರೀಯ ಸಂಗತಿಗಳಿವೆ.

 

ಜನಪರ ಕಲ್ಯಾಣಗಳಿವೆ. ಅರಸರ ದಾರಿಯ್ಲೇ ಮಾಡುತ್ತಾರೆ. ಅರಸು ಆಗಲಿಕ್ಕೆ ಸಾಧ್ಯವಿ ಲ್ಲ. ಅರಸು ಅರಸರೇ,  ಅರಸರ ನೆರಳು ಸಿದ್ದರಾಮಯ್ಯ ರ  ಮೇಲಿದೆ. ಬಡವರನ್ನು ಕಂಡರೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಅರಸರ ಬಿಂಬ ಕಾಣುತ್ತದೆ. ಆದರೆ ಅರಸರಲ್ಲ. ದುರಾಸೆ, ಆಮಿಷಗಳಿಂದ ನಾನು ಪಕ್ಷ ಬಿಟ್ಟಿಲ್ಲ. ಹಲವು ಮುಖ್ಯಮಂತ್ರಿಗಳ ಸಖ್ಯ ಇಟ್ಟುಕೊಂಡವನು. ಅಧಿಕಾರ, ದುರಾಸೆ ಇದ್ದರೆ ಅವರನ್ನು ಬಿಟ್ಟು ಬರುತ್ತಿರಲಿಲ್ಲ ಎಂದರು.

the fil favicon

SUPPORT THE FILE

Latest News

Related Posts