ಬೆಂಗಳೂರು; ಟಿಕಾ ಉತ್ಸವ ಮತ್ತು ಲಸಿಕೆ ಸ್ನೇಹ ಅಥವಾ ಲಸಿಕೆ ಮೈತ್ರಿಯಂತಹ ಅಭಿಯಾನ ನಡೆಸಿದ್ದರೂ ಲಸಿಕೆ ನೀಡುವ ವೇಗವು ಇನ್ನೂ ಸುಧಾರಣೆಯಾಗಿಲ್ಲ. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತು 3 ತಿಂಗಳಾಗಿದ್ದರೂ ದೇಶದಲ್ಲಿ ದಿನಕ್ಕೆ ಸರಾಸರಿ 3.58 ಮಿಲಿಯನ್ ಪ್ರಮಾಣ ತಲುಪಲು ಸಾಧ್ಯವಾಗಿದೆ.
45 ವರ್ಷದ ಮೀರಿದ ಎಲ್ಲರಿಗೂ ಲಸಿಕೆ ನೀಡಲು ಮುಂದಾದ ನಂತರ ಏಪ್ರಿಲ್ ಅಂತ್ಯಕ್ಕೆ 3.25 ಮಿಲಿಯನ್ ಡೋಸ್‌ಗಳಿಗಷ್ಟೇ ಏರಲಿದೆ. 2021ರ ಮಾರ್ಚ್ 15ರ ಅಂತ್ಯಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಲಸಿಕೆ ಅಭಿಯಾನದ ವೇಗವು ಸರಾಸರಿ 1.4 ಮಿಲಿಯನ್‌ನಷ್ಟಿತ್ತು ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣವೇ ಬಹಿರಂಗಪಡಿಸಿದೆ.
ಅಲ್ಲದೆ 2021ರ ಜುಲೈ ವೇಳೆಗೆ 250 ಮಿಲಿಯನ್ ಜನರಿಗೆ 500 ಮಿಲಿಯನ್ ಡೋಸ್ ನೀಡುವ ಗುರಿ ಹೊಂದಬೇಕು. ಈ ಮಧ್ಯೆ ಲಸಿಕೆ ನೀಡುವ ಅಭಿಯಾನದ ವೇಗವು ಸುಧಾರಣೆಯಾಗದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ ಎಂದು ಆರೋಗ್ಯ ತಜ್ಞರೂ ಎಚ್ಚರಿಸಿದ್ದಾರೆ.
ಲಸಿಕೆಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದಿದ್ದರೆ ಭಾರತದ ವ್ಯಾಕ್ಸಿನೇಷನ್ ಕಾರ್ಯಕ್ರಮವೂ ಕುಂಠಿತಗೊಳ್ಳಬಹುದು. ಲಸಿಕೆ ಕೊರತೆ ಇಲ್ಲವೆಂದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಹೇಳುತ್ತಿದವೆಯಾದರೂ ಮಹಾರಾಷ್ಟ್ರ, ಛತ್ತೀಸ್‌ಗಡ್ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಕೊರತೆಯನ್ನು ವರದಿ ಮಾಡಿವೆ.
ಲಸಿಕೆ ಅಭಿಯಾನದ ವೇಗವು ಸ್ಥಿರವಾಗಿದೆ. ಫೆಬ್ರವರಿ 15, 2021 ರ ಹೊತ್ತಿಗೆ, ಭಾರತವು ತನ್ನ 500 ಮಿಲಿಯನ್ ಡೋಸ್ ಗುರಿಯಲ್ಲಿ ಕೇವಲ ಶೇ. 3ರಷ್ಟು ಮಾತ್ರ ಒಳಗೊಂಡಿತ್ತು. ಎರಡನೇ ತಿಂಗಳ ಹೊತ್ತಿಗೆ ಇದು ಶೇ. 7ಕ್ಕೆ ಏರಿತು ಮತ್ತು ಮೂರು ತಿಂಗಳ ಕೊನೆಯಲ್ಲಿ 500 ಮಿಲಿಯನ್ ಡೋಸ್‌ಗಳಲ್ಲಿ ಶೇ. 23 ರಷ್ಟಿದೆ.
ಲಸಿಕೆ ಅಭಿಯಾನದ ದರವು ಪ್ರಸ್ತುತ ಏಳು ದಿನಗಳ ಸರಾಸರಿ ದಿನಕ್ಕೆ 3.25 ಮಿಲಿಯನ್ ಮೀರದಿದ್ದರೆ, ಭಾರತವು ತನ್ನ ಜನಸಂಖ್ಯೆಯ ಶೇ. 40 ಮತ್ತು ಲಸಿಕೆ ನೀಡಲು 14 ತಿಂಗಳು (ಜೂನ್ 2022 ರವರೆಗೆ) ಲಸಿಕೆ ನೀಡಲು ಒಂಬತ್ತು ತಿಂಗಳುಗಳ ಅವಧಿ (ಜನವರಿ 2022 ರವರೆಗೆ) ತೆಗೆದುಕೊಳ್ಳುತ್ತದೆ ಎಂದು ವರದಿಯೊಂದು ಹೇಳಿದೆ.
ರಾಜ್ಯಸಭಾ ಸಮಿತಿ ವರದಿ ಪ್ರಕಾರ ಮುಂದಿನ ಮೂರೂವರೆ ತಿಂಗಳಲ್ಲಿ ಭಾರತವು ಸುಮಾರು 383 ಮಿಲಿಯನ್ ಡೋಸ್ ಬೇಕಾಗಲಿದೆ. 2021ರ ಜುಲೈ ವೇಳೆಗೆ ದೇಶವು ತನ್ನ 500 ಮಿಲಿಯನ್ ಗುರಿ ತಲುಪಬೇಕೆಂದರೆ ತಿಂಗಳಿಗೆ 109 ದಶಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆಗಳಿರಬೇಕು. ಆದರೆ ಪ್ರಸ್ತುತ ದೇಶದಲ್ಲಿ ತಿಂಗಳಿಗೆ ಸುಮಾರು 83-113 ಮಿಲಿಯನ್ ಡೋಸ್ ಲಸಿಕೆಗಳನ್ನಷ್ಟೇ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದೂ ರಾಜ್ಯಸಭಾ ಸಮಿತಿ ವರದಿ ಹೇಳಿದೆ.
ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ತಮ್ಮ ಜನಸಂಖ್ಯೆಗೆ ಅಗತ್ಯವಿರುವ ಲಸಿಕೆಗಳ ಪ್ರಮಾಣವನ್ನು ಅಲ್ಪಾವಧಿಯಲ್ಲಿ ದ್ವಿಗುಣ ಮತ್ತು ಮೂರು ಪಟ್ಟು ಹೆಚ್ಚಿಸಿವೆ ಎಂದು ತಜ್ಞರು ಹೇಳಿದ್ದಾರೆ. ಈ ಕೆಲವು ಲಸಿಕೆಗಳು ಉದಾಹರಣೆಗೆ ಫಿಜರ್ ಮತ್ತು ಮಾಡರ್ನಾ ತಯಾರಿಸಿವೆ. ಬಹುಪಾಲು ಭಾರತೀಯರಿಗೆ ಈ ಲಸಿಕೆಗಳು ತುಂಬಾ ದುಬಾರಿಯಾಗಬಹುದು.
ಭಾರತ ಸರ್ಕಾರವು ಕೋವಾಕ್ಸಿನ್ ಅನ್ನು ಪ್ರತಿ ಡೋಸ್‌ಗೆ 206 ರೂ., ಮತ್ತು ಕೋವಿಶೀಲ್ಡ್ ಅನ್ನು ಪ್ರತಿ ಡೋಸ್‌ಗೆ 200 ರೂ. ನಿಗದಿಪಡಿಸಿದ್ದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ, ಸ್ಪುಟ್ನಿಕ್ ವಿ ಬೆಲೆ ಸುಮಾರು 749 ರೂ ($ 10) ಆಗಿದೆ. ಫಿಜರ್ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕು. ಮತ್ತು ಎರಡು ಡೋಸ್‌ಗಳಿಗೆ ಸುಮಾರು $ 40 ಖರ್ಚಾಗುತ್ತದೆ ಎಂದು ಡಿಸೆಂಬರ್ 2020 ರಲ್ಲಿಯೇ ವರದಿಯಾಗಿದೆ.
ಇಲ್ಲಿಯವರೆಗೆ ಭಾರತ ಸರ್ಕಾರವು ಕೇವಲ ಎರಡು ಲಸಿಕೆಗಳನ್ನು ಮಾತ್ರ ಅನುಮೋದಿಸಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಮತ್ತು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಹಾಗೂ ಭಾರತ್ ಬಯೋಟೆಕ್ ಕೋವಾಕ್ಸಿನ್‌ನ್ನು ಅಭಿವೃದ್ಧಿಪಡಿಸಿ ತಯಾರಿಸಿದೆ. ಲಸಿಕೆಗಳ ಪೂರೈಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತವು ಏಪ್ರಿಲ್ 13 ರಂದು ಮೂರನೇ ಕೋವಿಡ್ -19 ಲಸಿಕೆಯಾಗಿರುವ ಸ್ಪುಟ್ನಿಕ್-ವಿ ಅನ್ನು ಅಂಗೀಕರಿಸಿದೆ. ಇದನ್ನು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಆಮದು ಮಾಡಿಕೊಳ್ಳಲಿದೆ. ಇದು ಭಾರತದಲ್ಲಿ ಲಸಿಕೆ ನೀಡಲು ಕ್ಲಿನಿಕಲ್ ಪ್ರಯೋಗಗಳನ್ನು ಸಹ ನಡೆಸಿತ್ತು.
ಸ್ಪುಟ್ನಿಕ್ ವಿ ತಯಾರಿಸಲು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್, ರಷ್ಯಾದ ಸಾರ್ವಭೌಮ ಸಂಪತ್ತು ನಿಧಿ)ಯು ಹಲವಾರು ಭಾರತೀಯ ಔಷಧೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮತ್ತು ಈ ಕಂಪನಿಗಳು ವರ್ಷಕ್ಕೆ 850 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ.
ಆದರೆ ಆರ್‌ಡಿಐಎಫ್ ಅಥವಾ ಭಾರತ ಸರ್ಕಾರ ಎಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಲಿದೆ, ಯಾವಾಗ ಮತ್ತು ಯಾವ ಬೆಲೆಗೆ ಲಭ್ಯವಾಗಲಿದೆ ಎಂದು ಬಹಿರಂಗವಾಗಿ ಹೇಳಿಲ್ಲ. ಈ ಮಾಹಿತಿಯಿಲ್ಲದೆ ಈ ಲಸಿಕೆ ಭಾರತದಲ್ಲಿ ಎದುರಾಗಿದೆ ಎಂದು ಹೇಳಲಾಗಿರುವ ಪ್ರಸ್ತುತ ಕೊರತೆಯನ್ನು ನೀಗಿಸಲು ಮತ್ತು ಜುಲೈನಲ್ಲಿ 500 ಮಿಲಿಯನ್ ಡೋಸ್ ಗುರಿಯನ್ನು ಪೂರೈಸಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ ಎಂದು ಆರೋಗ್ಯ ಮೂಲಗಳು ತಿಳಿಸಿವೆ.
ಹಾಗೆಯೇ ಕಂಪೆನಿಗಳಲ್ಲಿ ಒಂದಾದ ಸ್ಟೆಲಿಸ್ ಬಯೋಫಾರ್ಮಾ ಪ್ರೈ. ಲಿಮಿಟೆಡ್, 2021 ರ ಮೂರನೇ ತ್ರೈಮಾಸಿಕದೊಳಗೆ ಲಸಿಕೆ ಸರಬರಾಜು ಮಾಡಲು ಉದ್ದೇಶಿಸಿದೆ ಎಂದು ಅದು ಮಾರ್ಚ್ 19, 2021 ರಂದು ತಿಳಿಸಿತ್ತು. ಅದರ ಪ್ರಗತಿಯೂ ಈವರೆವಿಗೂ ತಿಳಿದು ಬಂದಿಲ್ಲ. ಈ ನಡುವೆ ಯುಎಸ್ ಮತ್ತು ಯುಕೆ ನಂತಹ ಇತರ ದೇಶಗಳಲ್ಲಿ ಅನುಮೋದನೆ ಪಡೆದ ಲಸಿಕೆಗಳನ್ನು ತುರ್ತು ಬಳಕೆಯ ಅನುಮೋದನೆಗಾಗಿ ಪರಿಗಣಿಸಬಹುದು ಎಂದು ಭಾರತ ಸರ್ಕಾರ ಹೇಳಿದೆ.