‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 10 ಮುಖಗಳು

ಬೆಂಗಳೂರು; ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿ ಮೂಲಕ ಖರೀದಿಸಿದ್ದ ಔ‍ಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ಈವರೆವಿಗೆ ಕೋವಿಡ್‌ ಭ್ರಷ್ಟಾಚಾರದ 10 ಮುಖಗಳನ್ನು ಅನಾವರಣಗೊಳಿಸಿದೆ.


ಏಪ್ರಿಲ್‌ 21ರಿಂದ ಮೇ 28ರವರೆಗೆ ಸರಣಿ ರೂಪದಲ್ಲಿ ಪ್ರಕಟಿಸಿದ್ದ ಒಟ್ಟು 10 ತನಿಖಾ ವರದಿಗಳನ್ನಾಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ತನಿಖೆಗೆ ಕೈಗೆತ್ತಿಕೊಂಡಿದೆ. ನಮ್ಮ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರಸಮಿತಿಯೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರನ್ನೂ ದಾಖಲಿಸಿದೆ. ದೂರನ್ನು ಸ್ವೀಕರಿಸಿರುವ ಎಸಿಬಿಯೂ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ತನಿಖೆಯನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.


ಭ್ರಷ್ಟಾಚಾರದ 10 ಮುಖಗಳ ಸಂಕ್ಷಿಪ್ತ ಮಾಹಿತಿ ಮತ್ತು ಅದರ ಲಿಂಕ್‌ನ್ನು ಇಲ್ಲಿ ಕೊಡಲಾಗಿದೆ.


ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದ ಹೊತ್ತಿನಲ್ಲಿಯೂ ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ವಿಶ್ವಾಸರ್ಹವಲ್ಲದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಈ ಸಂಸ್ಥೆ ಖರೀದಿಸಿದ್ದ ಪಿಪಿಇ ಕಿಟ್‌ಗಳನ್ನೇ ರಾಜಸ್ಥಾನ ಸರ್ಕಾರ ಬಳಕೆಗೆ ಯೋಗ್ಯವಲ್ಲವೆಂದು ಹಿಂದಿರುಗಿಸಿತ್ತಲ್ಲದೇ ವಿಶ್ವಾಸರ್ಹವಲ್ಲವೆಂದು ಅವುಗಳನ್ನು ಬಳಕೆಯಿಂದಲೇ ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‌’ 2020ರ ಏಪ್ರಿಲ್‌ 21ರಂದೇ ವರದಿ ಪ್ರಕಟಿಸಿತ್ತು.


1. ವಿಶ್ವಾಸರ್ಹವಲ್ಲವೆಂದು ರಾಜಸ್ಥಾನ ಕೈ ಬಿಟ್ಟ ಕಿಟ್‌ಗಳನ್ನು ಖರೀದಿಸಿತೇ ? (ಏಪ್ರಿಲ್‌ 21,2020)
https://the-file.in/2020/04/governance/3409/


2. ಇನ್ನು, ವೈದ್ಯಕೀಯ ಸಲಕರಣೆಗಳ ಉತ್ಪಾದಕರಿಂದ ಖರೀದಿಸಬೇಕಿದ್ದ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ, ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿ ಮತ್ತು ವೆಬ್‌ಸೈಟ್‌ ಡಿಸೈನ್‌ ಮಾಡುವ ಕಂಪನಿಯಿಂದ 3 ಕೋಟಿ ರು. ಮೌಲ್ಯದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು.


ಉತ್ಪಾದಕರಲ್ಲದವರಿಗೆ 3 ಕೋಟಿ ಮೌಲ್ಯದ ಪಿಪಿಇ ಕಿಟ್‌ ಖರೀದಿ ಆದೇಶ (ಏಪ್ರಿಲ್‌ 27,2020)
https://the-file.in/2020/04/governance/3492/


3. ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ನಿರ್ದಿಷ್ಟ ಐವರು ಸರಬರಾಜುದಾರರಿಂದ 19 ಕೋಟಿ ರು.ಮೊತ್ತದಲ್ಲಿ ಸ್ಯಾನಿಟೈಸರ್‌ ಖರೀದಿಸಿತ್ತು. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 11.89 ಕೋಟಿ ರುಪಾಯಿ ನಷ್ಟವುಂಟಾಗಿದೆ ಎಂದು ಲಭ್ಯವಿರುವ ದಾಖಲೆ ಆಧರಿಸಿ ಮೇ 2,2020ರಂದು ವರದಿ ಪ್ರಕಟಿಸಿತ್ತು.
ಮೂಲ ದರ ಗುತ್ತಿಗೆ ಒಪ್ಪಂದದ ಪ್ರಕಾರ ಸ್ಯಾನಿಟೈಸರ್‌ ಸರಬರಾಜು ಮಾಡದ ಗುತ್ತಿಗೆದಾರ ಕಂಪನಿಗೆ ಅತ್ಯಲ್ಪ ಅವಧಿಯಲ್ಲೇ 250.00 ರು. ದರಕ್ಕೆ ಖರೀದಿ ಆದೇಶ ನೀಡಲಾಗಿತ್ತು.


ಸ್ಯಾನಿಟೈಸರ್‌ ಖರೀದಿಯಲ್ಲಿ ಭಾರೀ ಅಕ್ರಮ; 11 ಕೋಟಿ ನಷ್ಟ ( ಮೇ 2,2020)
https://the-file.in/2020/05/governance/3552/


4. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸರಬರಾಜಾಗಿರುವ ಬಹುತೇಕ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲ. ಹಾಗೆಯೇ ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಪ್ರಕರಣವನ್ನು ಮೇ 4ರಂದು ಬಹಿರಂಗಪಡಿಸಿತ್ತು.


ರಾಜ್ಯಕ್ಕೆ ಪೂರೈಕೆ ಆಗಿರುವ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಇ, ಎಫ್‌ಡಿಎ, ಉಪಕರಣ ಉತ್ಪಾದನೆ, ಮಾದರಿ ವಿವರಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ ಎಂಬುದನ್ನು ದಾಖಲೆಗಳ ಮೂಲಕ ಅಕ್ರಮದ ಇನ್ನೊಂದು ಮುಖವನ್ನು ಅನಾವರಣಗೊಳಿಸಿತ್ತು.


ಬಳಸಿ ಬಿಸಾಡಿದ್ದ ವೆಂಟಿಲೇಟರ್‌ ಖರೀದಿ; ಭ್ರಷ್ಟತೆಯ ಮತ್ತೊಂದು ಮುಖ ಅನಾವರಣ ( ಮೇ 4,2020)
https://the-file.in/2020/05/governance/3566/


5. ಕೇರಳ, ಒಡಿಶಾ ಸೇರಿದಂತೆ ಇನ್ನಿತರೆ ರಾಜ್ಯಗಳ ಆರೋಗ್ಯ ಇಲಾಖೆಗಳು ಕಪ್ಪು ಪಟ್ಟಿಗೆ ಸೇರಿಸಿದ್ದ ಗುಜರಾತ್‌ ಮೂಲದ ಆಕ್ಯುಲೈಫ್‌ ಕಂಪನಿಯಿಂದ ಗ್ಲೂಕೂಸ್‌ ಖರೀದಿ ಮಾಡಿದ್ದನ್ನು ಮೇ 6ರಂದು ಬಹಿರಂಗಗೊಳಿಸಿತ್ತು.


ಕಪ್ಪುಪಟ್ಟಿಯಲ್ಲಿರುವ ಕಂಪನಿಗಳಿಂದ ಗ್ಲೂಕೋಸ್‌ ಖರೀದಿ (ಮೇ 6, 2020)
https://the-file.in/2020/05/governance/3584/


6. ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ಹಿಂದುಳಿದ ತಾಲೂಕುಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿದ್ದ ಡಯಾಲಿಸಿಸ್‌ ಯಂತ್ರೋಪಕರಣಗಳನ್ನು ಬಿ ಆರ್‌ ಎಸ್‌ ಹೆಲ್ತ್‌ ಕೇರ್‌ ಕಂಪನಿಗೆ ಕನಿಷ್ಠ ದರಕ್ಕೆ ಮಾರಾಟ ಮಾಡಿತ್ತು. ಈ ಕಂಪನಿ ನೀಡಿದ್ದ ದರವನ್ನೇ ಸಂಸ್ಥೆ ಅನುಮೋದಿಸಿತ್ತು.


ಕುತಂತ್ರ; ಬಿ ಆರ್‌ ಶೆಟ್ಟಿ ಕಂಪನಿ ಪಾಲಾಗಿವೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಯಂತ್ರ ( ಮೇ 7, 2020)
https://the-file.in/2020/05/governance/3598/


7. ಮದ್ರಾಸ್‌ ಸರ್ಜಿಕಲ್ಸ್‌ ಸೇರಿದಂತೆ ಇನ್ನಿತರೆ ಕಂಪನಿಗಳಿಂದ ದುಬಾರಿ ದರದಲ್ಲಿ ಸಿರಿಂಜ್‌ ಉಪಕರಣ ಸೇರಿದಂತೆ ಮಲ್ಟಿ ಪ್ಯಾರಾ ಮೀಟರ್‌ಗಳನ್ನು ಖರೀದಿಸಿದ್ದ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ಅಕ್ರಮ ನಡೆಸಿದ್ದನ್ನು ಮೇ 11ರಂದು ದಾಖಲೆ ಸಮೇತ ಹೊರಗೆಡವಿತ್ತು.


ಸಿರಿಂಜ್‌ ಉಪಕರಣಗಳ ಖರೀದಿಯಲ್ಲೂ ಅಕ್ರಮ; ಕೋಟಿ ರು.ನಷ್ಟ ( ಮೇ 11, 2020)
https://the-file.in/2020/05/governance/3637/


8. ಮೆಡಿ ಅರ್ಥ್‌ ಕೇರ್‌ ಲಿಮಿಟೆಡ್‌ನಿಂದ ಖರೀದಿಸಿದ್ದ ಉಪಕರಣಗಳಲ್ಲಿಯೂ ಸರ್ಕಾರಕ್ಕೆ ನಷ್ಟವುಂಟಾಗಿತ್ತು. ಈ ಕುರಿತಾದ ವರದಿಯನ್ನು ಮೇ 22ರಂದು ಪ್ರಕಟಿಸಿತ್ತು.


ಮಾಸ್ಕ್‌, ಮಲ್ಟಿ ಪ್ಯಾರಾ ಮೀಟರ್‌ ಖರೀದಿಯಲ್ಲೂ ಅಕ್ರಮ; ದರದಲ್ಲಿ ಭಾರೀ ವ್ಯತ್ಯಾಸ ( ಮೇ 22,2020)
https://the-file.in/2020/05/governance/3802/


9. ಕೇವಲ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಷ್ಟೇ ಅಲ್ಲದೇ ಕೋವಿಡ್‌ 19ಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಚಾರಕ್ಕಾಗಿ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದಿದ್ದರಲ್ಲೂ ಅವ್ಯವಹಾರ ಕಂಡು ಬಂದಿತ್ತು. ವಾಹನಗಳನ್ನು ಬಳಸದೇ ಇದ್ದರೂ ವಾಹನ ಮಾಲೀಕರಿಗೆ 5 ಕೋಟಿ ರು.ಹೆಚ್ಚು ದುರುಪಯೋಗವಾಗಿತ್ತು ಎಂಬುದನ್ನು ಹೊರಗೆಡವಿತ್ತು.


ಕೋವಿಡ್‌ ಬಿಲ್ವಿದ್ಯೆ; ವಾಹನ ಬಳಸದಿದ್ದರೂ 5 ಕೋಟಿ ರು. ಪಾವತಿ ( ಮೇ 25,2020)
https://the-file.in/2020/05/governance/3827/


10. ಕೆ ಎನ್‌ 95 ಮಾಸ್ಕ್‌ ಖರೀದಿಸಿದ್ದ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯವೂ ಅಕ್ರಮದ ದುರ್ನಾತ ಬೀರಿತ್ತು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಮಾಸ್ಕ್‌ಗೆ 2 ರೀತಿಯ ದರ ಕೊಟ್ಟು ಖರೀದಿಸುವ ಮೂಲಕ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ವರದಿ ಮೇ 27ರಂದು ಪ್ರಕಟವಾಗಿತ್ತು.


ಕೆ ಎನ್‌ 95 ಮಾಸ್ಕ್‌ ಖರೀದಿ; ವಿಧಾನಪರಿಷತ್‌ ಸಚಿವಾಲಯದಲ್ಲೂ ದುರ್ನಾತ ( ಮೇ 27,2020)
https://the-file.in/2020/05/governance/3852/

SUPPORT THE FILE

Latest News

Related Posts