ಪುಷ್ಕರಣಿ, ತಡೆಗೋಡೆ ಕಾಮಗಾರಿಗೆ 8.4 ಕೋಟಿ ವೆಚ್ಚ; ಸರ್ಕಾರಿ ಹಣ ಬಳಕೆ ಆರೋಪ, ದೂರು ಸಲ್ಲಿಕೆ

ಬೆಂಗಳೂರು; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ ಸಮೀಪದಲ್ಲಿ ಅಕ್ರಮವಾಗಿ  ಪುಷ್ಕರಣಿ ನಿರ್ಮಾಣ ಮತ್ತು  ಕುಸಿಯುತ್ತಿರುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಿ ಒಟ್ಟಾರೆ  8.4 ಕೋಟಿ ರು.ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.   ಮಠದ ಆವರಣದೊಳಗೆ ಚಂದ್ರಮೌಳೇಶ್ವರ ದೇಗುಲದ ಪುಷ್ಕರಣಿ ಮತ್ತು ದೇಗುಲದ ಆವರಣದ ಕಾಮಗಾರಿಗೆ ಸರ್ಕಾರಿ  ಹಣವನ್ನು ಬಳಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತ  ಮಂಜುನಾಥ್ ಹಿರೇಚೌಟಿ  ಎಂಬುವರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ … Continue reading ಪುಷ್ಕರಣಿ, ತಡೆಗೋಡೆ ಕಾಮಗಾರಿಗೆ 8.4 ಕೋಟಿ ವೆಚ್ಚ; ಸರ್ಕಾರಿ ಹಣ ಬಳಕೆ ಆರೋಪ, ದೂರು ಸಲ್ಲಿಕೆ