ಸುಸ್ತಿಸಾಲದ ಖಾತೆಗೆ 3.56 ಕೋಟಿ ಹೊಂದಾಣಿಕೆ, ಬಡ್ಡಿ ಬಾಕಿಗೆ 20.65 ಕೋಟಿ ಪಾವತಿ

ಬೆಂಗಳೂರು; ಅವಧಿ ಸಾಲವು ಅನುತ್ಪಾದಕ ಆಸ್ತಿಯಾಗಿದ್ದರೂ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಗೆ ಅಪೆಕ್ಸ್‌ ಬ್ಯಾಂಕ್‌ 4500.00 ಲಕ್ಷ ರು.ಗಳ ದುಡಿಯುವ ಬಂಡವಾಳ ಮಂಜೂರು ಮಾಡಿರುವ ಪ್ರಕರಣವನ್ನು ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದಾರೆ. 2018-19ನೇ ಸಾಲಿಗೆ ಸಂಬಂಧಿಸಿದಂತೆ ಅಪೆಕ್ಸ್‌ ಬ್ಯಾಂಕ್‌ ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯಲ್ಲಿ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಯ ಸಾಲದ ವೃತ್ತಾಂತವನ್ನು ಬಿಚ್ಚಿಡಲಾಗಿದೆ. ಸಾಲಗಾರ ಕಂಪನಿಯು ಸಾಲಕ್ಕಾಗಿ 2018ರ ಜುಲೈ 12ರಂದು ಅಪೆಕ್ಸ್‌ ಬ್ಯಾಂಕ್‌ಗೆ ಹೊಸ ಪ್ರಸ್ತಾವನೆ ಸಲ್ಲಿಸಿತ್ತು. 2018-19ನೇ ಸಾಲಿಗೆ ಕಬ್ಬು ಅರೆಯಲು ದುಡಿಯುವ ಬಂಡವಾಳ … Continue reading ಸುಸ್ತಿಸಾಲದ ಖಾತೆಗೆ 3.56 ಕೋಟಿ ಹೊಂದಾಣಿಕೆ, ಬಡ್ಡಿ ಬಾಕಿಗೆ 20.65 ಕೋಟಿ ಪಾವತಿ