2 ತಿಂಗಳ ಹಿಂದಿನ ಬಿಯರ್‍‌ ಮಾರಾಟ, ತಪಾಸಣೆಗೊಳಪಡದ ಉತ್ಪಾದನೆ, ವಹಿವಾಟು; ಖಜಾನೆಗೆ ಭಾರೀ ನಷ್ಟ

ಬೆಂಗಳೂರು; ರಾಜ್ಯದಲ್ಲಿರುವ ಒಟ್ಟು ಮೈಕ್ರೋ ಬ್ರೂವೆರಿಗಳ ಪೈಕಿ 25 ಮೈಕ್ರೋ ಬ್ರೂವೆರಿಗಳಲ್ಲಿ ಗ್ರಾಹಕರಿಗೆ ತಾಜಾ ಬಿಯರ್ ಸಿಗುತ್ತಿಲ್ಲ. ಬದಲಿಗೆ  15 ದಿನಗಳಿಂದ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.   ವಿಸ್ಕಿ ಮತ್ತು ಬ್ರಾಂಡಿಯಲ್ಲಿ ನಿಗದಿತ ಅನುಪಾತದ ಪ್ರಕಾರ ಮಾಲ್ಟ್‌ ಮದ್ಯಸಾರವನ್ನು ಮಿಶ್ರಣ ಮಾಡುತ್ತಿಲ್ಲ ಎಂದು ಸಿಎಜಿಯು ಬೆಳಕಿಗೆ ತಂದಿದ್ದರ ಬೆನ್ನಲ್ಲೇ ಮೈಕ್ರೋ ಬ್ರೂವೆರಿಗಳಲ್ಲಿಯೂ ಸಹ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍‌ಗಳನ್ನು ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿರುವುದು ಮುನ್ನೆಲೆಗೆ … Continue reading 2 ತಿಂಗಳ ಹಿಂದಿನ ಬಿಯರ್‍‌ ಮಾರಾಟ, ತಪಾಸಣೆಗೊಳಪಡದ ಉತ್ಪಾದನೆ, ವಹಿವಾಟು; ಖಜಾನೆಗೆ ಭಾರೀ ನಷ್ಟ