ಆರ್‍‌ಸಿಬಿ ವಿಜಯೋತ್ಸವ; ಜನಸಂದಣಿ ನಿಯಂತ್ರಣಕ್ಕೆ ಇದ್ದಿದ್ದು ಕೇವಲ 79 ಅಧಿಕಾರಿಗಳು, ಎಚ್ಚರಿಸದ ಕಂಟ್ರೋಲ್‌ ರೂಂ

ಬೆಂಗಳೂರು; ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಸಂಬಂಧಿಸಿದಂತೆ 2009ರಲ್ಲಿನ ಸುತ್ತೋಲೆಯಲ್ಲಿ ನಿಗದಿಪಡಿಸಿದ್ದ ಕಾರ್ಯವಿಧಾನಗಳನ್ನು ಅನುಸರಿಸುವಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ವ್ಯವಸ್ಥಾಪಕರು ಮತ್ತು ಆರ್‍‌ಸಿಬಿ ಸಂಘಟಕರು ವಿಫಲರಾಗಿದ್ದರು. ಕ್ರೀಡಾಂಗಣದ ಪ್ರವೇಶ ದ್ವಾರಗಳನ್ನು ನಿಯಂತ್ರಿಸದೇ ಇರುವುದೇ ಕಾಲ್ತುಳಿತ, ಸಾವು, ನೋವುಗಳಿಗೆ ಮೂಲ ಕಾರಣ ಎಂದು ನಿವೃತ್ತ ನ್ಯಾಯಾಧೀಶ ಮೈಕಲ್‌ ಕುನ್ಹಾ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.   ಬಂದೋಬಸ್ತ್‌ಗಾಗಿ 515 ಪುರುಷ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಜನಸಂದಣಿ ನಿರ್ವಹಿಸಲು ಮತ್ತು ನಿಯಂತ್ರಿಸಲು ಕೇವಲ 79 ಪುರುಷ ಅಧಿಕಾರಿಗಳನ್ನು ಗೇಟ್‌ಗಳ ಹೊರಗೆ ನಿಯೋಜಿಸಿತ್ತು … Continue reading ಆರ್‍‌ಸಿಬಿ ವಿಜಯೋತ್ಸವ; ಜನಸಂದಣಿ ನಿಯಂತ್ರಣಕ್ಕೆ ಇದ್ದಿದ್ದು ಕೇವಲ 79 ಅಧಿಕಾರಿಗಳು, ಎಚ್ಚರಿಸದ ಕಂಟ್ರೋಲ್‌ ರೂಂ