ವರ್ಗಾವಣೆ ಸಂಘರ್ಷ; ಸಚಿವರ ಪಟ್ಟಿ ಬದಿಗೊತ್ತಿದ ಸಿಎಂ ಸಚಿವಾಲಯ, ಹೊಸ ಪಟ್ಟಿ ಜಾರಿಗೊಳಿಸಲು ಸೂಚನೆ

ಬೆಂಗಳೂರು; ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ಸಚಿವ ಸಂತೋಷ್‌ ಲಾಡ್‌ ನಡುವೆ ಸಂಘರ್ಷ ಉಂಟಾಗಿದೆ.     ಈ ಮೊದಲು ಸಚಿವ ಲಾಡ್‌ ಅವರಿಂದ ಅನುಮೋದಿತಗೊಂಡಿದ್ದ ಪಟ್ಟಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಕತ್ತರಿಯಾಡಿಸಿದ್ದರು. ಸಚಿವರು ಅನುಮೋದಿಸಿದ್ದ ಬಹುತೇಕ ಅಧಿಕಾರಿಗಳ ಹೆಸರು ಸಿಎಂ ಅನುಮೋದಿತ ಪಟ್ಟಿಯಲ್ಲಿ ಇರಲಿಲ್ಲ.   ಹೀಗಾಗಿ ಇದರಿಂದ ಕುಪಿತರಾಗಿದ್ದ ಸಚಿವ ಲಾಡ್‌, ‘ವರ್ಗಾವಣೆ ಪ್ರಸ್ತಾಪಿತ ಅಧಿಕಾರಿಗಳ ಸೇವಾ ವಿವರ ಹಾಗೂ ಹುದ್ದೆಗಳ ವಿವರಗಳೊಂದಿಗೆ … Continue reading ವರ್ಗಾವಣೆ ಸಂಘರ್ಷ; ಸಚಿವರ ಪಟ್ಟಿ ಬದಿಗೊತ್ತಿದ ಸಿಎಂ ಸಚಿವಾಲಯ, ಹೊಸ ಪಟ್ಟಿ ಜಾರಿಗೊಳಿಸಲು ಸೂಚನೆ