ಕೋವಿಡ್‌ ಹೊಡೆತಕ್ಕೆ ಬ್ಯಾಂಕ್‌ಗಳು ತತ್ತರ; ಕೃಷಿ ವಲಯದಲ್ಲಿ 21,773.89 ಕೋಟಿ ಎನ್‌ಪಿಎ

ಬೆಂಗಳೂರು; ಕೋವಿಡ್‌ ಎರಡನೇ ಅಲೆ ಆರಂಭವಾಗಿದ್ದ (2021ರ ಮಾರ್ಚ್‌ ಅಂತ್ಯಕ್ಕೆ) ಹೊತ್ತಿನಲ್ಲೇ ರಾಜ್ಯದಲ್ಲಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವು 54,756.47 ಕೋಟಿ ರು. ನಷ್ಟಿತ್ತು ಎಂಬುದು ಇದೀಗ ಬಹಿರಂಗವಾಗಿದೆ. ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ ಲಾಕ್‌ಡೌನ್‌ನಿಂದಾಗಿ ಉದ್ಭವಿಸಿದ ಆರ್ಥಿಕ ವಲಯದಲ್ಲಿನ ಬಿಕ್ಕಟ್ಟು, ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 2020ರ ಡಿಸೆಂಬರ್‌ 31ರ ಅಂತ್ಯಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣವು 48,722.17 ಕೋಟಿಯಷ್ಟಿತ್ತು. 2021ರ ಮಾರ್ಚ್‌ 31ರ ಅಂತ್ಯಕ್ಕೆ 54,756.47 ಕೋಟಿಯಷ್ಟಾಗಿದೆ. … Continue reading ಕೋವಿಡ್‌ ಹೊಡೆತಕ್ಕೆ ಬ್ಯಾಂಕ್‌ಗಳು ತತ್ತರ; ಕೃಷಿ ವಲಯದಲ್ಲಿ 21,773.89 ಕೋಟಿ ಎನ್‌ಪಿಎ