ವಿಧಾನಸೌಧ ತಳಮಹಡಿಯಲ್ಲೂ ನೆಲ ಕುಸಿತ; ಕಣ್ಣಳತೆಯಲ್ಲಿ ಕುಸಿದಿದ್ದರೂ ಗಮನಿಸದ ಪಿಡಬ್ಲ್ಯೂಡಿ

ಬೆಂಗಳೂರು; ವಿಧಾನಸೌಧ ಕೆಂಗಲ್ ದ್ವಾರದ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದು ಆತಂಕ ಸೃಷ್ಟಿಯಾಗಿದ್ದರ ಬೆನ್ನಲ್ಲೇ ಇದೀಗ ವಿಧಾಸೌಧದ ತಳಮಹಡಿಯಲ್ಲಿನ ವರಾಂಡವೂ ಕುಸಿದಿದೆ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ. ವಿಧಾನಸೌಧದ ನೆಲ ಮಹಡಿಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದರೂ ಕಚೇರಿಯ ಕಣ್ಣಳತೆಯಲ್ಲಿರುವ ತಳಮಹಡಿಯ ಕ್ಯಾಂಟೀನ್‌ನ ವರಾಂಡದಲ್ಲಿ ನೆಲ ಕುಸಿದಿದ್ದರೂ ಗಮನ ಹರಿಸದಿರುವುದು ಇಂಜಿನಿಯರ್‌ ಅವರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವರಾಂಡದಲ್ಲಿ ನೆಲ ಕುಸಿಯುತ್ತಿರುವುದನ್ನು ಕ್ಯಾಂಟೀನ್‌ ಗುತ್ತಿಗೆದಾರರು ಸಿಬ್ಬಂದಿ ಮತ್ತು … Continue reading ವಿಧಾನಸೌಧ ತಳಮಹಡಿಯಲ್ಲೂ ನೆಲ ಕುಸಿತ; ಕಣ್ಣಳತೆಯಲ್ಲಿ ಕುಸಿದಿದ್ದರೂ ಗಮನಿಸದ ಪಿಡಬ್ಲ್ಯೂಡಿ